ಬೀದರ್‌ನಲ್ಲಿ ಪತ್ರಿಕಾ ಗೋಷ್ಠಿ ಮಿಷನ್ ಮಹಾಬೋಧಿ ಮಹಾವಿಹಾರದ ವಿಮೋಚನೆಗಾಗಿ “ದೆಹಲಿ ಚಲೋ” ಆಂದೋಲನಕ್ಕೆ ಕರೆ
ನಮ್ಮೂರು ನ್ಯೂಸ್ ವರದಿ : ಫೆಬ್ರವರಿ 12, 2026 ರಂದು ದೆಹಲಿಯಲ್ಲಿ ಮಿಷನ್ ಮಹಾಬೋಧಿ ಮಹಾವಿಹಾರದ ವಿಮೋಚನೆಗಾಗಿ ಭೀಕು ಸಂಘದ ವತಿಯಿಂದ ಅತಿದೊಡ್ಡ ಚಳುವಳಿ ಆಯೋಜಿಸಲಾಗಿದೆ ಎಂದು ತಿಳಿಸಲಾಯಿತು. ಸಮಾನತೆ ಮತ್ತು ಭ್ರಾತೃತ್ವದ ಮೌಲ್ಯಗಳನ್ನು ಉತ್ತೇಜಿಸುವ ಈ ಆಂದೋಲನವು ದೇಶದ ಪ್ರತಿಯೊಬ್ಬ ನಾಗರಿಕನ ಚಳುವಳಿಯಾಗಿದೆ ಎಂದು ಸಂಘದ ಮುಖಂಡರು ಹೇಳಿದರು.
ಭಾರತದ ಸಂವಿಧಾನದ ನಿರ್ಮಾತರಾದ ಬಾಬಾಸಾಹೇಬ್ ಡಾ. ಭೀಮರಾವ್ ಅಂಬೇಡ್ಕರ್ ಅವರು ಸಮಾನತೆ ಆಧಾರಿತ ಮತ್ತು ಬೌದ್ಧ ಧರ್ಮದ ಮೌಲ್ಯಗಳಿಂದ ಪ್ರೇರಿತವಾದ ಭಾರತವನ್ನು ಕನಸು ಕಂಡಿದ್ದರು. ಅವರ ಕನಸಿನಂತೆ ದೇಶವನ್ನು ವಿಶ್ವದ ಅತ್ಯಂತ ಶಕ್ತಿಶಾಲಿ ರಾಷ್ಟ್ರವನ್ನಾಗಿ ರೂಪಿಸುವ ದಿಸೆಯಲ್ಲಿ ಮಿಷನ್ ಮಹಾಬೋಧಿ ಮಹಾವಿಹಾರದ ಮುಕ್ತಿ ಅಗತ್ಯವಾಗಿದೆ. ಆದ್ದರಿಂದ ಈ ಆಂದೋಲನಕ್ಕೆ ಎಲ್ಲರೂ ಕೈಜೋಡಿಸಿ ಯಶಸ್ವಿಗೊಳಿಸಬೇಕೆಂದು ಮನವಿ ಮಾಡಲಾಯಿತು.
ಈ ಹಿನ್ನೆಲೆಯಲ್ಲಿ ಇಂದು ಬೀದರ್ ಜಿಲ್ಲಾ ಪತ್ರಿಕಾ ಭವನದಲ್ಲಿ ಪತ್ರಿಕಾ ಗೋಷ್ಠಿ ನಡೆಸಿ, ಫೆಬ್ರವರಿ 12ರಂದು ನಡೆಯಲಿರುವ “☸️ ದೆಹಲಿ ಚಲೋ ☸️” ಮಹಾ ಚಳುವಳಿಗೆ ಸಾರ್ವಜನಿಕರಿಂದ ವ್ಯಾಪಕ ಬೆಂಬಲ ನೀಡುವಂತೆ ಕರೆ ನೀಡಲಾಯಿತು.
ಪತ್ರಿಕಾ ಗೋಷ್ಠಿಯಲ್ಲಿ ಪೂಜ್ಯ ಭಂತೆ ಕರುಣಾನಂದ, ಬೌದ್ಧ ಉಪಾಸಕ್ ಕಪಿಲ್ ಗೊಡಬೋಲೇ, ಉಪಾಸಿಕಾ ವಿಜಯ್ ದಶಮಿ ಗುನ್ನಳ್ಳಿ, ಗಂಗಮ್ಮ ಫುಲೇ, ಸುರೇಶ್ ಜೋಜನಾ, ಭೀಮ್ ಆರ್ಮಿಯ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಯಶಪಾಲ್ ಬೋರೆ, ಹಿರಿಯ ಮುಖಂಡರಾದ ರಾಜಕುಮಾರ್ ಮೂಲ ಭಾರತಿ, ಶಶಿಧರ್ ಭಾಸನ, ಜಗನಾಥ್, ಕಾಂಬ್ಳೆ ನರ್ಸಿಂಗ್ ಕೆ. ದೊಡ್ಡೆ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು.
📑... @✍️ ವರದಿ ನಮ್ಮ ಪ್ರತಿನಿಧಿ ಬೀದರ್ ಜಿಲ್ಲೆ