ಬೆಂಗಳೂರಿನಲ್ಲಿ ಕಲಾಸಾಗರ ಉತ್ಸವ ವಿವಿಧ ಕ್ಷೇತ್ರಗಳ ಸಾಧಕರಿಗೆ ರಾಜ್ಯಮಟ್ಟದ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಲಾಯಿತು.

News Image

ನಮ್ಮೂರು ನ್ಯೂಸ್ ವರದಿ
ಬೆಂಗಳೂರು: ಕಲಾಸಾಗರ ಸಂಸ್ಥೆಯ ವತಿಯಿಂದ 2026ರ ಅಕ್ಟೋಬರ್ 18ರಂದು ಬೆಂಗಳೂರಿನ ಗಾಂಧಿ ಭವನದ ಬಾಪು ಸಭಾಂಗಣದಲ್ಲಿ ಕಲಾಸಾಗರ ಉತ್ಸವವನ್ನು ಆಯೋಜಿಸಲಾಗಿತ್ತು. ಈ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸಾಧನೆಗೈದ ಗಣ್ಯರಿಗೆ ರಾಜ್ಯಮಟ್ಟದ ಪ್ರಶಸ್ತಿಗಳನ್ನು ಪ್ರದಾನ ಮಾಡಿ ಗೌರವಿಸಲಾಯಿತು.

ಕಾರ್ಯಕ್ರಮದಲ್ಲಿ ಖ್ಯಾತ ತಜ್ಞ ವೈದ್ಯರು ಹಾಗೂ ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕರಾದ ಡಾ. ಅಂಜನಪ್ಪ, ನಿವೃತ್ತ ಪೊಲೀಸ್ ಇನ್ಸ್‌ಪೆಕ್ಟರ್ ಹಾಗೂ ಹಿರಿಯ ರಂಗಕಲಾವಿದ ನೆಲಮಂಗಲದ ದೊಡ್ಡ ರಾಮಯ್ಯ, ಡಾ. ರಾಜ್‌ಕುಮಾರ್ ಅಭಿಮಾನಿಗಳ ಸಂಘದ ಅಧ್ಯಕ್ಷರು, ಖ್ಯಾತ ಸಮಾಜಸೇವಕರು, ಕನ್ನಡಪರ ಹೋರಾಟಗಾರರು ಹಾಗೂ ಸಂಸ್ಕೃತಿ ಚಿಂತಕರಾದ ಡಾ. ಟಿ. ಗೋವಿಂದರಾಜ್, ಮಂಡ್ಯ ಜಿಲ್ಲೆಯ ಕೆ.ಆರ್. ಪೇಟೆಯ ಪ್ರಗತಿಪರ ರೈತ ಕೆ.ಎಸ್. ರಾಜೇಗೌಡ, ಹಿರಿಯ ಪೌರಾಣಿಕ ರಂಗಕಲಾವಿದೆ ಕೆಂಚನಪುರದ ಶ್ರೀಮತಿ ರೇಖಾ ಮೋಹನ್ ಕುಮಾರ್, ರಂಗಭೂಮಿ ನಿರ್ದೇಶಕ ಬೆಂಗಳೂರಿನ ರವಿ ಪಾಳೇಗಾರ್, ಸ್ವಯಂಸೇವಕರ ವೇದಿಕೆಯ ಅಧ್ಯಕ್ಷ ಧನಂಜೇಗೌಡ ಹಾಗೂ ಕಲಾಸಾಗರ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಮಹೇಶ್ ಸಾಗರ್ ಉಪಸ್ಥಿತರಿದ್ದರು.

ಅಲ್ಲದೆ, ಬೆಟ್ಟಲಸೂರಿನ ಶ್ರೀನಿವಾಸಮೂರ್ತಿ, ಬೆಂಗಳೂರಿನ ಕಿಮ್ಸ್ ಆಸ್ಪತ್ರೆಯ ಡಾ. ಸಿ.ಎಲ್. ಶಿವಮೂರ್ತಿ, ವಿಶ್ವ ಕನ್ನಡ ಸಾಮ್ರಾಜ್ಯದ ಅಧ್ಯಕ್ಷ ಬಿ.ಜಿ. ಚೇತನ್ ಕುಮಾರ್, ಚಲನಚಿತ್ರ ನಟ ಡಾ. ಕೆ.ಎಚ್. ಮಹೇಶ್ (ಬೇಲೂರು) ಹಾಗೂ ಪತ್ರಕರ್ತ ಸಾಕೆ ನಾರಾಯಣ್ ಸೇರಿದಂತೆ ಹಲವು ಗಣ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಕಾರ್ಯಕ್ರಮವನ್ನು ಆಯೋಜಿಸಿದ ಪಿ. ಶ್ರೀಧರ್ (BSNL) ಅವರು ಖ್ಯಾತ ಸಮಾಜಸೇವಕರಾಗಿ, ಕನ್ನಡಪರ ಸಂಘಟಕರಾಗಿ ಹಾಗೂ ಕಲಾಪೋಷಕರಾಗಿ ಗುರುತಿಸಿಕೊಂಡಿದ್ದು, ಕರ್ನಾಟಕ ರಾಜ್ಯ ಮಕ್ಕಳ ಸಾಹಿತ್ಯ ಪರಿಷತ್ತಿನ ವಿಜಯನಗರ ಕ್ಷೇತ್ರದ ಅಧ್ಯಕ್ಷರಾಗಿಯೂ ಕಾರ್ಯನಿರ್ವಹಿಸುತ್ತಿದ್ದಾರೆ.

ಕಲೆ, ಸಾಹಿತ್ಯ, ಸಂಸ್ಕೃತಿ, ಸಮಾಜಸೇವೆ, ಕೃಷಿ, ವೈದ್ಯಕೀಯ ಹಾಗೂ ರಂಗಭೂಮಿ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದವರನ್ನು ಗುರುತಿಸಿ ಗೌರವಿಸುವ ಮೂಲಕ ಕಲಾಸಾಗರ ಉತ್ಸವವು ಸಾಧಕರಿಗೆ ಪ್ರೋತ್ಸಾಹ ನೀಡುವ ವೇದಿಕೆಯಾಗಿ ಗಮನ ಸೆಳೆಯಿತು. ವಿವಿಧ ಕ್ಷೇತ್ರಗಳ ಗಣ್ಯರ ಉಪಸ್ಥಿತಿಯಲ್ಲಿ ನಡೆದ ಈ ಕಾರ್ಯಕ್ರಮವು ಕಲಾ ಮತ್ತು ಸಾಂಸ್ಕೃತಿಕ ಕ್ಷೇತ್ರದ ಸಾಧಕರಿಗೆ ಗೌರವ ಸಲ್ಲಿಸುವ ಮಹತ್ವದ ಸಮಾರಂಭವಾಗಿತ್ತು.