“ಮುಖ್ಯನ್ಯಾಯಮೂರ್ತಿ ಬಿ.ಆರ್. ಗವಾಯಿ ಮೇಲೆ ಶೂ ಎಸೆದ ಘಟನೆ ಸಂವಿಧಾನ ಮತ್ತು ನ್ಯಾಯದ ಮೌಲ್ಯಗಳಿಗೆ ಅವಮಾನ, ರಾಷ್ಟ್ರದ ಮನಸ್ಸು ನೋಯಿಸಿದ ಘಟನೆ!”
ನವದೆಹಲಿ, ಅಕ್ಟೋಬರ್ 6, 2025:
ಸುಪ್ರೀಂ ಕೋರ್ಟ್ನ ಮುಖ್ಯ ನ್ಯಾಯಮೂರ್ತಿಗಳಾದ ಬಿ. ಆರ್. ಗವಾಯಿ ಅವರ ಮೇಲೆ ವಕೀಲನೊಬ್ಬ ಶೂ ಎಸೆದು ಅವಮಾನ ಮಾಡಿದ ಘಟನೆ ರಾಷ್ಟ್ರಮಟ್ಟದಲ್ಲಿ ಆಕ್ರೋಶ ಉಂಟುಮಾಡಿದೆ. ಸಾಮಾಜಿಕ ವಲಯದಿಂದ ಹಿಡಿದು ಕಾನೂನು ತಜ್ಞರು, ಮಾನವ ಹಕ್ಕು ಸಂಘಟನೆಗಳು, ಹಾಗೂ ನಾಗರಿಕ ಸಮಾಜದ ನಾಯಕರವರೆಗೆ ಎಲ್ಲರೂ ಈ ಕ್ರಿಯೆಯನ್ನು ನ್ಯಾಯಾಂಗದ ಅವಮಾನ ಮತ್ತು ಸಂವಿಧಾನದ ಅವಹೇಳನೆ ಎಂದು ಖಂಡಿಸಿದ್ದಾರೆ.
ಮುಖ್ಯನ್ಯಾಯಮೂರ್ತಿಗಳಾದ ಬಿ. ಆರ್. ಗವಾಯಿ, ದೇಶದ ಪ್ರಥಮ ದಲಿತ ಸಮುದಾಯದ ಮುಖ್ಯ ನ್ಯಾಯಮೂರ್ತಿಗಳಲ್ಲಿ ಒಬ್ಬರಾಗಿದ್ದು, ತಮ್ಮ ಸಾಧನೆ ಮತ್ತು ಪ್ರಾಮಾಣಿಕತೆಯಿಂದ ಕಾನೂನು ಕ್ಷೇತ್ರದಲ್ಲಿ ಗೌರವನೀಯ ಸ್ಥಾನಕ್ಕೇರಿದ್ದಾರೆ. ಈ ಘಟನೆ ನ್ಯಾಯಾಂಗದ ಗೌರವ ಮತ್ತು ಸ್ವತಂತ್ರತೆಗೆ ಹೊಡೆತ ನೀಡುವ ಪ್ರಯತ್ನವೆಂದು ಕಾನೂನು ವಲಯ ತೀವ್ರವಾಗಿ ವಿರೋಧ ವ್ಯಕ್ತಪಡಿಸಿದೆ.
ಘಟನೆಯ ನಂತರ ಪೊಲೀಸರು ಶೂ ಎಸೆದ ವಕೀಲ ರಾಕೇಶ್ ಕಿಶೋರ್ ಅವರನ್ನು ಬಂಧಿಸಿದ್ದು, ಕಾನೂನು ಪ್ರಕ್ರಿಯೆ ಪ್ರಾರಂಭವಾಗಿದೆ ಎಂದು ಮೂಲಗಳು ತಿಳಿಸಿವೆ.
ಸಾಮಾಜಿಕ ನಾಯಕರಾದ ಅಂಬೇಡ್ಕರವಾದಿ ಚಳುವಳಿಯ ಪ್ರತಿನಿಧಿಗಳು ಹೇಳುವಂತೆ, “ಇದು ಕೇವಲ ವ್ಯಕ್ತಿಗೇ ಮಾಡಿದ ಅವಮಾನವಲ್ಲ; ಇದು ಸಂವಿಧಾನದ ಆತ್ಮಕ್ಕೆ ಹೊಡೆತ. ನ್ಯಾಯಾಂಗದ ಗೌರವವನ್ನು ಕಾಪಾಡುವುದು ಪ್ರತಿ ಪ್ರಜೆಯ ಕರ್ತವ್ಯ.”
ಜಾತಿ ಆಧಾರಿತ ಅಸಹನೆ ಮತ್ತು ಹಿಂಸಾತ್ಮಕ ಮನೋಭಾವಗಳು ಇನ್ನೂ ಸಮಾಜದಲ್ಲಿ ಜೀವಂತವಾಗಿರುವುದನ್ನು ಈ ಘಟನೆ ಬಯಲಿಗೆಳೆದಿದೆ ಎಂದು ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ.
ಒಟ್ಟಾರೆ, ಸುಪ್ರೀಂ ಕೋರ್ಟ್ನ ಗೌರವ, ನ್ಯಾಯಾಂಗದ ಸ್ವಾಯತ್ತತೆ ಮತ್ತು ಪ್ರಜಾಪ್ರಭುತ್ವದ ಮೂಲ್ಯಗಳನ್ನು ಕಾಪಾಡಲು ಎಲ್ಲ ವರ್ಗದ ಜನರು ಒಗ್ಗಟ್ಟಿನಿಂದ ಈ ಘಟನೆಯನ್ನು ಖಂಡಿಸುತ್ತಿದ್ದಾರೆ.
📑... @✍️ ವರದಿ ಅಂಬಣ್ಣ ಕುಕನೂರ್