ಅಂತರ್ ಪಂಚಾಯಿತಿ ಮಟ್ಟದ ಕ್ರಿಕೆಟ್ ಪಂದ್ಯಾವಳಿಯಲ್ಲಿ ಕಪ್ ಗೆಲ್ಲುವ ಮೂಲಕ ನಿರಂತರವಾಗಿ ಉತ್ತಮ ಸಾಧನೆ ಮಾಡುತ್ತಿರುವ ಗುಡ್ಡೆಹೊಸೂರಿನ ವಿಸ್ಟರ್ಸ್ ಸ್ಪೋರ್ಟ್ಸ್ ಕ್ಲಬ್ ತಂಡ

News Image

ಮಡಿಕೇರಿ : ಕಂಬಿಬಾಣೆ ಇಲೆವೆನ್ ಸ್ಟಾರ್ ಸಂಘಟಕರು ಆಯೋಜಿಸಿದ್ದ ಮೂರುದಿನಗಳ ಅಂತರ್ ಪಂಚಾಯಿತಿ ವ್ಯಾಪ್ತಿಯ ಹೊನಲು ಬೆಳಕಿನ ಟೆನ್ನಿಸ್ ಕ್ರಿಕೆಟ್ ಪಂದ್ಯಾವಳಿ ಸುಂಟಿಕೊಪ್ಪ ಸಮೀಪದ ಕಂಬಿಬಾಣೆ ಸರ್ಕಾರಿ ಶಾಲೆಯ ಮೈದಾನದಲ್ಲಿ ನಡೆಯಿತು
ಸುಮಾರು 24 ತಂಡಗಳು ಪ್ರತಿನಿಧಿಸಿದ್ದ ಟೂರ್ನಿಯಲ್ಲಿ ವಿಜಿಟರ್ಸ್ ಗುಡ್ಡೆಹೊಸೂರು ತಂಡವು ಅಮೋಘ ಆಟವನ್ನು ಪ್ರದರ್ಶಿಸಿ ಪ್ರಥಮ ಸ್ಥಾನ ಪಡೆಯುವುದರ ಮೂಲಕ ನಗದು 36000 ರೂ ಹಾಗೂ ಟ್ರೋಫಿಯನ್ನು ತನ್ನದಾಗಿಸಿಕೊಂಡಿತು.
ಹಾಗೆ ಹಲವು ದಿನಗಳ ಹಿಂದೆ ಹೊಸಪಟ್ಟಣ ಅಂತರ್ ಪಂಚಾಯತಿಯ ವ್ಯಾಪ್ತಿಯ ಟೂರ್ನಿಯಲ್ಲಿ ಕೂಡ ಇದೆ ವಿಸಿಟರ್ಸ್ ಗುಡ್ಡೆಹೊಸೂರು ತಂಡವು ದ್ವಿತೀಯ ಸ್ಥಾನವನ್ನು ಗಿಟ್ಟಿಸಿಕೊಂಡಿತ್ತು. ಈ ಮೂಲಕ ತಂಡ ಕೊಡಗಿನದ್ಯಂತ ಹಲವಾರು ಕ್ರಿಕೆಟ್ ಪಂದ್ಯಾವಳಿಗಳಲ್ಲಿ ಭಾಗವಹಿಸಿ ಗಮನಾರ್ಹ ಸಾದನೆ ಮಾಡುತ್ತಿದೆ.
ಗುಡ್ಡೆಹೊಸೂರುವಿನ ವಿಸಿಟರ್ಸ್ ಕ್ರಿಕೆಟ್ ಕ್ಲಬ್ ಸಂಸ್ಥೆಯು ಯುವಪ್ರತಿಭೆಗಳಿಗೆ ತರಬೇತಿ ನೀಡುವುದು ಹಾಗೂ ಕ್ರೀಡೆಗೆ ಸಂಬಂದಿಸಿದ ಎಲ್ಲಾ ರೀತಿಯ ಸಲಕರಣೆಗಳ ಮಾರಾಟ ಮಾಡುದರಲ್ಲೂ ಹೆಸರುವಾಸಿಯಾಗಿದೆ.
📝... @ ವರದಿ ರಾಬರ್ಟ್ ಕುಶಲನಗರ ತಾಲೂಕು