ದೇಶದಲ್ಲೇ ಅತಿ ಎತ್ತರದ 200 ಮೀಟರ್‌ ಡಾ.ಬಾಬಾಸಾಹೇಬ್ ಅಂಬೇಡ್ಕರ್ ಪುತ್ಥಳಿ ನಿರ್ಮಾಣಕ್ಕೆ ಆಗ್ರಹ. 1035 ಕಿ.ಮಿ ಕ್ರಮಿಸಿ ಬಂದ ಸ್ವಾಭಿಮಾನಿಗಳ ಕಾಲ್ನಡಿಗೆ ಜಾಥಾ

News Image

ಬೆಂಗಳೂರು: ದೇಶದಲ್ಲೇ ಅತಿ ಎತ್ತರದ 200 ಮೀಟರ್‌ ಎತ್ತರದ ಡಾ.ಬಾಬಾಸಾಹೇಬ್ ಅಂಬೇಡ್ಕರ್ ಪುತ್ಥಳಿ ಕರ್ನಾಟಕ ರಾಜ್ಯ ಸರ್ಕಾರ ನಿರ್ಮಿಸಬೇಕೆಂದು ಉದ್ದೇಶದಿಂದ ಸರ್ಕಾರದ ಗಮನ ಸೆಳೆಯಲು ಭೀಮ್ ಪ್ರಜಾ ಸಂಘ ಬೆಂಗಳೂರು ಸಂಸ್ಥಾಪಕ ರಾಜ್ಯಾಧ್ಯಕ್ಷ ವೈಟ್ ಫೀಲ್ಡ್ ಮುರುಗೇಶ ನೇತೃತ್ವದಲ್ಲಿ 6 ಮಾರ್ಚ್ 2025 ರಿಂದ ಪ್ರಾರಂಭವಾಗಿ ಸತತ 45 ದಿನಗಳ ಕಾಲ ಒಟ್ಟು 1035 ಕಿ.ಮಿ ಸ್ವಾಭಿಮಾನಿಗಳ ಕಾಲ್ನಡಿಗೆ ಜಾಥಾ ಏಪ್ರಿಲ್ 19 ರಂದು ಪೂರ್ಣಗೊಂಡಿತು . ಇದರ ಅಂಗವಾಗಿ ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ಸಮಾರೋಪ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮದಲ್ಲಿ ಸಭೆಯನ್ನು ಉದ್ದೇಶಿಸಿ ವೈಟ್ ಫೀಲ್ಡ್ ಮುರುಗೇಶ ಮಾತನಾಡಿ ,14 ಏಪ್ರಿಲ್ 2025 ಡಾ.ಬಾಬಾಸಾಹೇಬ್ ಅಂಬೇಡ್ಕರ್ ರವರ 134 ನೇ ಜಯಂತ್ಯೋತ್ಸವದ ದಿನದಂದು ಮಾನ್ಯ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ರವರು ಕರ್ನಾಟಕದಲ್ಲಿ ದೇಶದಲ್ಲೇ ಅತಿ ಎತ್ತರದ ಬಾಬಾಸಾಹೇಬ್ ಅಂಬೇಡ್ಕರ್ ರವರ ಪುತ್ಥಳಿ ನಿರ್ಮಿಸುವುದಾಗಿ ಘೋಷಣೆ ಮಾಡಿರುವುದು ಸ್ವಾಗತಾರ್ಹವಾಗಿದೆ ಎಂದರು
ಹಾಗೂ ನಮ್ಮ ಹೋರಾಟ ಯಶಸ್ವಿಯಾಗಿದೆ ಮಾನ್ಯ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ನವರು 200 ಮೀಟರ್ ಎತ್ತರದ ಪುತ್ಥಳಿ ನಿರ್ಮಾಣ ಮಾಡಿ ಅತಿ ಶೀಘ್ರದಲ್ಲೇ ಇತಿಹಾಸ ನಿರ್ಮಿಸಬೇಕೆಂದು ಒತ್ತಾಯಿಸಿದ್ದಾರೆ
ಈ ಸ್ವಾಭಿಮಾನಿಗಳ ಕಾಲ್ನಡಿಗೆ ಜಾಥಾಕ್ಕೆ ಬೆಂಬಲಿಸಿ ಪೂಜ್ಯ ಭಂತೆ ಭೋದ್ದಿ ದತ್ತ, ಭಂತೆ ಸೇವಕ ಆರ್.ಪಿ.ಐ (ಅಂಬೇಡ್ಕರ್) ಪಕ್ಷದ ರಾಜ್ಯಾಧ್ಯಕ್ಷ ಮಹೇಶ ಗೋರನಾಳಕರ್, ಸಮತಾ ಸೈನಿಕ ದಳ ಮುಖಂಡರಾದ ಎಂ.ವೆಂಕಟಸ್ವಾಮಿ, ವಿ.ಸಿ.ಕೆ ಪಕ್ಷದ ರಾಜ್ಯಾಧ್ಯಕ್ಷ ಎಂ.ಸಿ ವೆಣು, ಭೀಮ ಸಂಘಟನೆಗಳ ಮಹಾ ಒಕ್ಕೂಟದ ರಾಜ್ಯಾಧ್ಯಕ್ಷ ಕೆ.ಮರಿಯಪ್ಪ, ಕರ್ನಾಟಕ ಸಮತಾ ಸೈನಿಕ ದಳದ ರಾಜ್ಯಾಧ್ಯಕ್ಷ ಚೆನ್ನಕೃಷ್ಣಪ್ಪಾ, ಭೀಮ ಶಕ್ತಿ ಡಿ.ಎಸ್.ಎಸ್ ರಾಜ್ಯ ಸಂಚಾಲಕ ಹೆಬ್ಬಾಳ ವೆಂಕಟೇಶ, ದಲಿತ ಯುನಿಟಿ ಮೂವಮೆಂಟ ರಾಜ್ಯಾಧ್ಯಕ್ಷ ಪ್ರಕಾಶ ರಾವಣ, ಇನ್ನಿತರರು ಉಪಸ್ಥಿತರಿದ್ದರು
📝.... @✍️ ವರದಿ ಅಂಬಣ್ಣ ಕುಕುನೂರ್