ಆರೋಗ್ಯ ಇಲಾಖೆಯಿಂದ ವಿಶ್ವ ಪಾರ್ಶ್ವವಾಯು ದಿನಾಚರಣೆ
ನಮ್ಮೂರು ನ್ಯೂಸ್ ವರದಿ :
ಕೊಪ್ಪಳ, ಅಕ್ಟೋಬರ್ 29, ಜಿಲ್ಲಾಆಡಳಿತ ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಇಲಾಖೆ, ಜಿಲ್ಲಾ ಸರ್ವೇಕ್ಷಣಾಧಿಕಾರಿಗಳ ಘಟಕ ಹಾಗೂ ತಾಲೂಕಾ ಆರೋಗ್ಯಾಧಿಕಾರಿಗಳ ಕಛೇರಿ, ಕೊಪ್ಪಳ ಇವರ ಸಂಯುಕ್ತಾಶ್ರಯದಲ್ಲಿ ಗುರುವಾರದಂದು ಕೊಪ್ಪಳ ನಗರದ 12ನೇ ವಾರ್ಡ್ ಸಜ್ಜಿಹೊಲ ಪ್ರದೇಶದಲ್ಲಿ ಹಕ್ಕಿ-ಪಿಕ್ಕಿ ಜನಾಂಗದವರಿಗೆ “ವಿಶ್ವ ಪಾರ್ಶ್ವವಾಯು ದಿನಾಚರಣೆ” ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ತಾಲೂಕಾ ಆರೋಗ್ಯ ಶಿಕ್ಷಣಾಧಿಕಾರಿ ಗಂಗಮ್ಮ ಕೆ ಅವರು ಮಾತನಾಡಿ, ಪ್ರತಿ ವರ್ಷದಂತೆ ಈ ವರ್ಷವೂ ಅಕ್ಟೋಬರ್ 29 ರಂದು “ವಿಶ್ವ ಪಾರ್ಶ್ವವಾಯು ದಿನಾಚರಣೆ” ಕಾರ್ಯಕ್ರಮವನ್ನು ಆಯೋಜಿಸಲಾಗುತ್ತದೆ. ಈ ವರ್ಷದ ಘೋಷವಾಕ್ಯ "ಪ್ರತಿ ನಿಮಿಷವೂ ಮುಖ್ಯ" (Every Minute Counts) ಎಂಬುದಾಗಿದೆ. ಈ ಕಾರ್ಯಕ್ರಮದ ಉದ್ದೇಶ ಮೆದುಳಿಗೆ ರಕ್ತ ಪೂರೈಕೆ ಸ್ಥಗಿತಗೊಂಡಾಗ ಅಥವಾ ಅಡ್ಡಿಯಾದಾಗ ಸಂಭವಿಸುವ ಪಾರ್ಶ್ವವಾಯು (ಸ್ಟೊçÃಕ್) ಬಗೆಗಿನ ಜಾಗೃತಿ, ತಡೆಗಟ್ಟುವಿಕೆ ಮತ್ತು ಅದರ ಗಂಭೀರತೆಯ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸುವುದು ಈ ದಿನದ ಮುಖ್ಯ ಉದ್ದೇಶವಾಗಿದೆ. ಪಾರ್ಶ್ವವಾಯು ಸಂಭವಿಸಿದಾಗ ಮೆದುಳಿನ ಕೋಶಗಳು ನಾಶವಾಗದಂತೆ ತಡೆಯಲು ಸಮಯಕ್ಕೆ ಸರಿಯಾಗಿ ಚಿಕಿತ್ಸೆ ನೀಡುವುದು ಎಷ್ಟು ಮುಖ್ಯ ಎಂಬುದನ್ನು ಈ ಧ್ಯೇಯವಾಕ್ಯ ತಿಳಿಸುತ್ತದೆ. ಪಾರ್ಶ್ವವಾಯುವಿನ ಆರಂಭಿಕ ಲಕ್ಷಣಗಳನ್ನು ಸುಲಭವಾಗಿ ಗುರುತಿಸಲು ವೈದ್ಯರು FAST ( F : ಮುಖದ ಒಂದು ಭಾಗ ಸೊಟ್ಟಗಾಗುವುದು, A:ಕೈಗಳಲ್ಲೇ ದುರ್ಬಲತೆ ಅಥವಾ ಕೈ ಕೆಳಗೆ ಜಾರುವುದು, S :ಮಾತನಾಡಲು ತೊಂದರೆ ಅಥವಾ ಮಾತು ಅಸ್ಪಸ್ಟವಾಗುವುದು, T : ತಕ್ಷಣ ಕರೆ ಮಾಡಿ) ಸೂತ್ರವನ್ನು ನೆನಪಿಟ್ಟುಕೊಳ್ಳಲು ಹೇಳಿದರು. ರಕ್ತದೊತ್ತಡ ನಿಯಂತ್ರಿಸಿ, ಮಧುಮೇಹ ನಿಯಂತ್ರಿಸಿ, ತಂಬಾಕು & ಮದ್ಯ ಸೇವನೆಯಿಂದ ದೂರವಿರಿ, ಆರೋಗ್ಯಕರ ಆಹಾರ ಸೇವಿಸಿ ಮತ್ತು ತೂಕವನ್ನು ನಿಯಂತ್ರಿಸುವುದರ ಮೂಲಕ ಪಾರ್ಶ್ವವಾಯು ತಡೆಗಟ್ಟಲು ಸಾಧ್ಯವೆಂದು ಸಾರ್ವಜನಿಕರಿಗೆ ತಿಳಿಸಿದರು.
ಕಾರ್ಯಕ್ರಮದಲ್ಲಿ ಆರೋಗ್ಯ ನಿರೀಕ್ಷಣಾಧಿಕಾರಿಗಳಾದ ಶ್ರೀನಿವಾಸ, ನೌಶಾದ ಬೇಗಂ, ಅಂಗನವಾಡಿ ಕಾರ್ಯಕರ್ತೆಯರಾದ ಸಿದ್ದಮ್ಮ, ಆಶಾ ಕಾರ್ಯಕರ್ತೆಯರಾದ ಶೃತಿ ಬಿ.ಹೆಚ್, ರೇಣುಕಾ ಹಾಗೂ ಸಾರ್ವಜನಿಕರು ಭಾಗವಹಿಸಿದ್ದರು.