ಕರ್ನಾಟಕ ಬಹುಜನ ಚಳವಳಿಗೆ ಹೊಸ ಶಕ್ತಿ: ಡಾ. ಹ. ರಾ. ಮಹೇಶ್ ಸನ್ಮಾನ

News Image

ನಮ್ಮೂರು ನ್ಯೂಸ್ ವರದಿ : ಬೀದರ್, ಸೆ. 7
ಬಹುಜನ ಸಮಾಜ ಪಾರ್ಟಿಯ ಕರ್ನಾಟಕ ರಾಜ್ಯ ಸಂಯೋಜಕರಾಗಿ ನೇಮಕಗೊಂಡಿರುವ ಡಾ. ಹ. ರಾ. ಮಹೇಶ್ ರವರಿಗೆ ಬಿದರ್‌ನಲ್ಲಿ ಭವ್ಯ ಸನ್ಮಾನ ಕಾರ್ಯಕ್ರಮ ಜರುಗಿತು. ವಿಠಲ್ ದಾಸ್ ಪ್ಯಾಗೆ ಹಾಗೂ ಅವರ ಸಂಗಡಿಗರ ಆಶ್ರಯದಲ್ಲಿ ಬಿದರ್‌ನ ಸಿದ್ಧಾರ್ಥ ಮಹಾವಿದ್ಯಾಲಯದಲ್ಲಿ ಈ ಸನ್ಮಾನ ಸಮಾರಂಭ ನಡೆಯಿತು.

ಡಾ. ಮಹೇಶ್ ಅವರು ತಮ್ಮ ವೃತ್ತಿಜೀವನಕ್ಕೆ ಸ್ವಯಂ ಪ್ರೇರಿತವಾಗಿ ರಾಜೀನಾಮೆ ನೀಡಿ (VRS ಪಡೆದು), ಸಂಪೂರ್ಣವಾಗಿ ಬಹುಜನ ಚಳವಳಿಗೆ ತೊಡಗಿಸಿಕೊಂಡಿರುವುದು ಸಮಾಜದೊಳಗೆ ಹೊಸ ಚೈತನ್ಯ ಮೂಡಿಸಿದೆ. ಅವರ ಸಮಾಜಮುಖಿ ಕಾರ್ಯ, ಶೋಷಿತರ ಸಬಲಿಕರಣ ಮತ್ತು ಶಿಕ್ಷಣಾಭಿವೃದ್ಧಿ ಕಡೆಗಿನ ಬದ್ಧತೆಯನ್ನು ಗುರುತಿಸಿ ಈ ಸನ್ಮಾನವನ್ನು ಆಯೋಜಿಸಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಡಾ. ಮಹೇಶ್,
“ನಾನು ನನ್ನ ಜೀವನವನ್ನು ಬಹುಜನ ಚಳವಳಿಗೆ ಅರ್ಪಿಸಿದ್ದೇನೆ. ಕರ್ನಾಟಕದ ಪ್ರತಿಯೊಂದು ಭಾಗದಲ್ಲಿ ಬುದ್ಧ, ಬಸವ, ಫುಲೆ, ಶಾಹೂ, ಅಂಬೇಡ್ಕರ್ ಅವರ ಆದರ್ಶಗಳನ್ನು ಬೆಳೆಸುತ್ತೇವೆ. ಸಮಾಜದ ಹೋರಾಟದಲ್ಲಿ ನನ್ನೊಂದಿಗೆ ನೀವು ಸದಾ ಕೈ ಜೋಡಿಸಬೇಕು” ಎಂದು ಹಮ್ಮಿಕೊಂಡರು.

ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಪ್ರೇಮ್ ಸಾಗರ್ ದಾಂಡೇಕರ್, ರಾಜಕುಮಾರ್ ಗುನ್ನಳ್ಳಿ, ಶ್ಯಾಮಸುಂದರ್ ಖಾನಾಪುರಕರ, ಮಹಾದೇವ ಕಂಬಳೆ ಮತ್ತಿತರರು ತಮ್ಮ ಅಭಿಪ್ರಾಯ ಹಂಚಿಕೊಂಡು, ಸಮಾಜದ ಹೋರಾಟಕ್ಕೆ ಡಾ. ಮಹೇಶ್ ಅವರ ತ್ಯಾಗ ಮತ್ತು ಸೇವೆಯನ್ನು ಶ್ಲಾಘಿಸಿದರು.

ಬುದ್ಧ, ಬಸವಣ್ಣ, ಮಹಾತ್ಮ ಜ್ಯೋತಿರಾವ್ ಫುಲೆ, ಛತ್ರಪತಿ ಶಾಹೂ ಮಹಾರಾಜ, ನಾರಾಯಣ ಗುರು, ಸಾವಿತ್ರಿಬಾಯಿ ಫುಲೆ ಮತ್ತು ಡಾ. ಬಿ.ಆರ್. ಅಂಬೇಡ್ಕರ್ ಅವರ ಹೋರಾಟ-ತ್ಯಾಗವನ್ನು ಉಲ್ಲೇಖಿಸಿದರು.

ಸಮಾಜದಲ್ಲಿ ಸಮಾನತೆ, ಒಗ್ಗಟ್ಟು ಮತ್ತು ಶಿಕ್ಷಣದ ಬೆಳವಣಿಗೆಗೆ ನಿರಂತರ ಹೋರಾಟ ಅಗತ್ಯವಿದೆ ಎಂದು ಒತ್ತಿಹೇಳಿದರು.

ಕಾರ್ಯಕ್ರಮದ ಅಂತ್ಯದಲ್ಲಿ,
ಸಮಾಜದ ಪ್ರತಿನಿಧಿಗಳು ಒಗ್ಗಟ್ಟು, ಸಮಾನತೆ ಮತ್ತು ಶಿಕ್ಷಣದ ಮೂಲಕ ಸಮಾನತೆಯ ಸಮಾಜ ನಿರ್ಮಾಣಕ್ಕಾಗಿ ಹೋರಾಟವನ್ನು ಮುಂದುವರೆಸುವ ಪ್ರತಿಜ್ಞೆ ಮಾಡಿದರು
📑... @✍️ವರದಿ ನಮ್ಮ ಪ್ರತಿನಿಧಿ ಬೀದರ್ ಜಿಲ್ಲೆ