ಹಕ್ಕಿಪಿಕ್ಕಿ ಬುಡಕಟ್ಟು ಸಮುದಾಯದ ಖುಷಿ ಎಂಬ ಮೂಖ ಹೆಣ್ಣುಮಗಳ ಮೇಲೆ ಅತ್ಯಾಚಾರ
ಜನಾರಣ್ಯದಲ್ಲಿರುವ ಆದಿವಾಸಿ ಹಕ್ಕಿಪಿಕ್ಕಿ ಬುಡಕಟ್ಟು ಸಮುದಾಯದ, ಖುಷಿ ಎಂಬ ಮೂಖ ಹೆಣ್ಣುಮಗಳ ಮೇಲೆ ಅತ್ಯಾಚಾರಗಳಾದ ಮಾನವ ಮೃಗಗಳಿಗೆ ಕಾನೂನಿನ ರೀತಿಯಲ್ಲಿ ಶಿಕ್ಷೆಯಾಗಬೇಕು,
ರಾಮನಗರದ ಬಿಡದಿಯ ಭದ್ರಪುರ ಕಾಲೋನಿಯ ಹಕ್ಕಿಪಿಕ್ಕಿ ಆದಿವಾಸಿ ಬುಡಕಟ್ಟು ಸಮುದಾಯದ ಖುಷಿ ಎಂಬ 17 ವರ್ಷದ ಮಾತು ಬಾರದ ಕಿವಿ ಕೆಳದ ಮೂಖ ಅಂಗವಿಕಲ ಹೆಣ್ಣುಮಗಳ ಮೇಲೆ ದುಷ್ಟರು ಅತ್ಯಾಚಾರ ಮಾಡಿ ಕೊಲೆಯ ಮಾಡಿರುವುದು ಮೇಲ್ನೋಟಕ್ಕೆ ಕಂಡು ಬಂದಿರುತ್ತದೆ.
ಸಮಾಜ ಕಟ್ಟಕಡೆಯ ಸಮುದಾಯದ ಬಡ ಹೆಣ್ಣುಮಗಳ ಮೇಲೆ ಅತ್ಯಾಚಾರ ಮಾಡಿ ಕೊಲೆ ನಡೆದಿರುವ ಬಗ್ಗೆ FIR ಮಾಡಿದ್ದಾರೆ.
ಕೊಲೆ ಮಾಡಿರುವ ಆರೋಪಿಗಳನ್ನು ಶೀಘ್ರದಲ್ಲಿ ಪತ್ತೆಹಚ್ಚಬೇಕು. ಈ ಬಗ್ಗೆ ನಮ್ಮ ಕರ್ನಾಟಕ ಸ್ವಾಭಿಮಾನಿ ಸಂಘಟನೆಗಳ ಒಕ್ಕೂಟದಿಂದ ತೀವ್ರವಾಗಿ ಖಂಡಿಸುತ್ತೇವೆ.
ಈ ಬಗ್ಗೆ ಸಂಸ್ಥಾಪಕರು ಮತ್ತು ರಾಜ್ಯಾಧ್ಯಕ್ಷರಾದ A. C. ರಾಜು ರವರ ಆದೇಶ ಮೇರಿಗೆ ಅತೀ ಶೀಘ್ರದಲ್ಲಿ ಘಟನ ಸ್ಥಳಕ್ಕೆ ಬೇಟಿ ನೀಡಿ ಪರಿಶೀಲನೆ ಮಾಡಿ ಈ ವಿಷಯಕ್ಕೆ ಸಂಬಂಧಪಟ್ಟ ಪೊಲೀಸ್ ಇಲಾಖೆಯ ಅಧಿಕಾರಗಳನ್ನು, ಸಮಾಜ ಇಲಾಖೆಯ ಅಧಿಕಾರಗಳನ್ನು ಹಾಗೂ ಮಹಿಳಾ ಮತ್ತು ಮಕ್ಕಳ ಆಯೋಗದ ಅಧ್ಯಕ್ಷರನ್ನು ಭೇಟಿ ಮಾಡಿ ಅನ್ಯಾಯಕ್ಕೆ ಇಡದ ಕುಮಾರಿ ಖುಷಿ ಎಂಬ ಹೆಣ್ಣು ಮಗಳಿಗೆ ನ್ಯಾಯ ಒದಗಿಸಲು ಹೋರಾಟ ಮಾಡಲು ಕರ್ನಾಟಕ ಸ್ವಾಭಿಮಾನಿ ಸಂಘಟನೆಗಳ ಒಕ್ಕೂಟದ ಎಲ್ಲಾ ಪದಾಧಿಕಾರಿಗಳು
ಪಣ್ಣತೊಟಿರುವುದಾಗಿ ಒಕ್ಕೂಟದ ಸಂಸ್ಥಾಪಕ ರಾಜ್ಯಾಧ್ಯಕ್ಷರಾದ. A.C. ರಾಜು ರವರು ತಿಳಿಸಿದ್ದಾರೆ.
ಇಂತಿ ತಮ್ಮ ವಿಶ್ವಾಸಿ
ಕರ್ನಾಟಕ ಸ್ವಾಭಿಮಾನಿ ಸಂಘಟನೆಗಳ ಒಕ್ಕೂಟ
ಪ್ರಚಾರ ಸಮಿತಿ ಅಧ್ಯಕ್ಷರು
. 📖... @✍️ಸಾಕೆ ನಾರಾಯಣ