ಅಗ್ನಿವಂಶ ಕ್ಷತ್ರಿಯ ಸಮುದಾಯದ ಮಕ್ಕಳಿಗೆ ಭವಿಷ್ಯದಲ್ಲಿ ಶಿಕ್ಷಣ ಕ್ಷೇತ್ರದಲ್ಲಿ ಉತ್ತಮ ಸಾಧನೆ ಮಾಡುವುದಕ್ಕೆ ಹೆಚ್ಚಿನ ಪ್ರೋತ್ಸಾಹ ಸಿಗಲಿದೆ ಎಂದು ಶಾಸಕ ಎಸ್ಆರ್ ಶ್ರೀನಿವಾಸ್ ಅಭಿಪ್ರಾಯಪಟ್ಟರು.

News Image

ಗುಬ್ಬಿ ತಾಲೂಕು: ಪಟ್ಟಣದ ಎ.ವಿ.ಕೆ ಕಲ್ಯಾಣ ಮಂಟಪದ ಆವರಣದಲ್ಲಿ ಶ್ರೀ ಅಗ್ನಿವಂಶ ಕ್ಷತ್ರಿಯ ವಿದ್ಯಾಭಿವೃದ್ಧಿ ಸಂಘದ ವತಿಯಿಂದ ನೂತನ ಸಾಂಸ್ಕೃತಿಕ ಭವನದ ಕಟ್ಟಡ ನಿರ್ಮಾಣಕ್ಕೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದ ಅವರು, ಭವಿಷ್ಯದಲ್ಲಿ ಸಮುದಾಯದ ಮಕ್ಕಳಿಗೆ ಉತ್ತಮ ಸಂಸ್ಕಾರ ಹಾಗೂ ಶಿಕ್ಷಣವನ್ನು ಒದಗಿಸುವ ನಿಟ್ಟಿನಲ್ಲಿ ಸಮುದಾಯದ ಮುಖಂಡರುಗಳು ದಿಟ್ಟ ಹೆಜ್ಜೆಯನ್ನು ಇಟ್ಟಿರುವುದು ಕಂಡಾಗ ಅವರ ದೂರದೃಷ್ಟಿಯ ಆಲೋಚನೆ ಉತ್ತಮವಾಗಿದೆ. ಈ ಸಾಂಸ್ಕೃತಿಕ ಭವನದ ನಿರ್ಮಾಣಕ್ಕೆ ಸಹಕಾರವನ್ನು ನೀಡಲಿದ್ದೇನೆ ಎಂದು ಹೇಳಿದರು.
ವಿದ್ಯಾಭಿವೃದ್ಧಿ ಸಂಘದ ಅಧ್ಯಕ್ಷ ಉಂಡೇ ರಾಮಯ್ಯನವರು ಮಾತನಾಡಿ ನಮ್ಮ ಸಮುದಾಯದ ವತಿಯಿಂದ ಮುಂದಿನ ಪೀಳಿಗೆಗೆ ಸಾಂಸ್ಕೃತಿಕತೆಯಿಂದ ಸಂಸ್ಕಾರ ಕಲಿಯಲು ಸಾಧ್ಯವಾಗುತ್ತದೆ. ಈ ಸಾಂಸ್ಕೃತಿಕ ಭವನವನ್ನು ನಿರ್ಮಾಣ ಮಾಡುವುದರಿಂದ ಶಿಕ್ಷಣ ಸೇರಿದಂತೆ ಇನ್ನಿತರೆ ವಿಶೇಷ ತರಬೇತಿಗಳನ್ನು ನಡೆಸುವುದಕ್ಕೆ ಅನುಕೂಲವಾಗುತ್ತದೆ ಎಂದು ತಿಳಿಸಿದರು.
ಸಂಘದ ಗೌರವಾಧ್ಯಕ್ಷ ನಂಜೇಗೌಡ ಮಾತನಾಡಿ ಈಗಾಗಲೇ ಸಮುದಾಯದ ಮುಖಂಡರುಗಳು ಹಾಗೂ ಬಂಧುಗಳ ಸಹಕಾರದಿಂದಾಗಿ ಸುಂದರವಾದ ಕಲ್ಯಾಣ ಮಂಟಪವನ್ನು ನಿರ್ಮಾಣ ನಿರ್ಮಾಣ ಮಾಡಿದ್ದು ಆರ್ಥಿಕವಾಗಿ ಸದೃಢವಾಗಲು ಸಾಧ್ಯವಾಗಿದೆ ಮುಂದೆ ಸಾಂಸ್ಕೃತಿಕ ಭವನವನ್ನು ನಿರ್ಮಾಣ ಮಾಡುವುದರಿಂದ ಹೆಚ್ಚಿನ ರೀತಿಯಲ್ಲಿ ಅನುಕೂಲವಾಗುತ್ತದೆ ಈ ನಿಟ್ಟಿನಲ್ಲಿ ಸಂಸದರು ಹಾಗೂ ಶಾಸಕರ ಹೆಚ್ಚಿನ ಸಹಕಾರ ಅಗತ್ಯವಿದೆ ಎಂದರು.
ಈ ಕಾರ್ಯಕ್ರಮದಲ್ಲಿ ಅಗ್ನಿಬನ್ನಿರಾಯ ಸಹಕಾರ ಸಂಘದ ಅಧ್ಯಕ್ಷ ಹುಚ್ಚಪ್ಪ ಉಪಾಧ್ಯಕ್ಷ ಗೋವಿಂದಯ್ಯ,
ವಿದ್ಯಾಭಿವೃದ್ಧಿ ಸಂಘದ ಉಪಾಧ್ಯಕ್ಷ ಶಿವಣ್ಣ, ಖಜಾಂಚಿ ಸಣ್ಣರಂಗಯ್ಯ, ಕಾರ್ಯದರ್ಶಿ ಜಿ.ಬಿ ಬಂಡಿ ಮಲ್ಲಪ್ಪ, ಜಂಟಿ ಕಾರ್ಯದರ್ಶಿ ನಾಗರಾಜು, ನಿರ್ದೇಶಕರಾದ ಬಲರಾಮಯ್ಯ, ಜಿ.ಸಿ ಲೋಕೇಶ್ ಬಾಬು,ಯಜಮಾನ್ ಸಣ್ಣ ಹನುಮಂತಯ್ಯ,ಹಿಂದುಳಿದ ವರ್ಗದ ಮಾಜಿ ಸದಸ್ಯ ಯೋಗಾನಂದಕುಮಾರ್, ಕಂಬಿ ನರಸಿಂಹಯ್ಯ,ಚಿಕ್ಕೋನಹಳ್ಳಿ ರಾಜಣ್ಣ,ಗಂಗಣ್ಣ,ಬಾಲಕೃಷ್ಣ,ಶ್ರೀನಿವಾಸ್, ಮೂರ್ತಿ,ವರಲಕ್ಷ್ಮಿ,ಲಕ್ಕಣ್ಣ,ರಾಮಚಂದ್ರ ರೇಣುಕಮ್ಮ,ಚಿಕ್ಕನರಸೇಗೌಡ ಮುಂತಾದವರು ಹಾಜರಿದ್ದರು.
📝... @✍️ವರದಿ ಗುಬ್ಬಿ ಭರತ್