ಬೀದರ್ ಬಿಎಸ್ಪಿ ಹೋರಾಟ ಫಲಿತಾಂಶ: ಮುಕ್ಕಣ್ಣ ಕರಿಗಾರರಿಗೆ ಕರ್ತವ್ಯದಿಂದ ಬಿಡುಗಡೆ ಆದೇಶ ಜಾರಿ
ಬೀದರ್, ನವೆಂಬರ್ 4, 2025:
ಸಾರ್ವಜನಿಕ ಹಾಗೂ ಆಡಳಿತಾತ್ಮಕ ಹಿತದೃಷ್ಟಿಯಿಂದ, ಬೀದರ್ ಜಿಲ್ಲಾ ಪಂಚಾಯತದ ಹಿರಿಯ ಉಪ ಕಾರ್ಯದರ್ಶಿ ಶ್ರೀ ಮುಕ್ಕಣ್ಣ ಕರಿಗಾರ ಅವರನ್ನು ಪ್ರಸ್ತುತ ಕರ್ತವ್ಯದಿಂದ ಬಿಡುಗಡೆ ಮಾಡಲಾಗಿದ್ದು, ಮುಂದಿನ ಆದೇಶದವರೆಗೆ ಅವರ ಸೇವೆಯನ್ನು ಕಾಗಿನೆಲೆ ಪ್ರಾಧಿಕಾರದ ಆಯುಕ್ತರ ಹುದ್ದೆಗೆ ನೇಮಕಾತಿಗೊಳಿಸಲು ಸರ್ಕಾರ ಕ್ರಮ ಕೈಗೊಂಡಿದೆ.
🔹 ಸರ್ಕಾರದ ಅಧಿಸೂಚನೆ ಆಧಾರ:
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ ರಾಜ್ ಇಲಾಖೆ, ಬೆಂಗಳೂರು, ದಿನಾಂಕ 30.10.2025ರ ಅಧಿಸೂಚನೆ ಸಂಖ್ಯೆ RDPR PBV 2025 (E) ಅನ್ವಯ ಈ ವರ್ಗಾವಣೆ ಜಾರಿಗೊಳಿಸಲಾಗಿದೆ.
ಅದರಂತೆ, ಶ್ರೀ ಮುಕ್ಕಣ್ಣ ಕರಿಗಾರರು ತಾವು 03.11.2025 ರಂದು ಕಛೇರಿ ಕರ್ತವ್ಯದಿಂದ ಬಿಡುಗಡೆ ಮಾಡಲು ಮನವಿ ಸಲ್ಲಿಸಿದ್ದು, ಅದನ್ನು ಅನುಮೋದಿಸಿ ಜಿಲ್ಲಾ ಪಂಚಾಯತದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದವರು ಅವರ ಕರ್ತವ್ಯದಿಂದ ಅಧಿಕೃತವಾಗಿ ಬಿಡುಗಡೆ ಮಾಡಿದ್ದಾರೆ.
🔹 ಹೊಸ ಪ್ರಭಾರ ಹಂಚಿಕೆ:
ಬೀದರ್ ಜಿಲ್ಲಾ ಪಂಚಾಯತದ ಮುಖ್ಯ ಯೋಜನಾಧಿಕಾರಿಗಳಾದ ಶ್ರೀ ಕಿಶೋರಕುಮಾರ ದುಬೆ ಅವರಿಗೆ ತಾತ್ಕಾಲಿಕವಾಗಿ ಉಪ ಕಾರ್ಯದರ್ಶಿ (ಹಿರಿಯ ಶ್ರೇಣಿ) ಹುದ್ದೆಯ ಹೆಚ್ಚುವರಿ ಪ್ರಭಾರ ವಹಿಸಲಾಗಿದ್ದು, ಆದೇಶ ತಕ್ಷಣದಿಂದಲೇ ಜಾರಿಗೆ ಬಂದಿದೆ.
ಆಡಳಿತಾತ್ಮಕ ಪಾರದರ್ಶಕತೆ ಮತ್ತು ನಿಯಮಾತ್ಮಕ ಕ್ರಮ:
ಈ ಕ್ರಮವು ಸರ್ಕಾರದ ಸೇವಾ ನಿಯಮಾವಳಿ ಹಾಗೂ ಪಾರದರ್ಶಕ ಆಡಳಿತ ನೀತಿಗಳ ಅಡಿಯಲ್ಲಿ ಕೈಗೊಳ್ಳಲಾಗಿದ್ದು,
ಗ್ರಾಮೀಣಾಭಿವೃದ್ಧಿ ಕ್ಷೇತ್ರದಲ್ಲಿ ನಿರಂತರ ಆಡಳಿತಾತ್ಮಕ ಕಾರ್ಯಚಟುವಟಿಕೆಗಳು ಅಡಚಣೆ ಇಲ್ಲದೆ ನಡೆಯುವಂತೆ ನೋಡಿಕೊಳ್ಳಲಾಗಿದೆ.
ಆದೇಶದ ಪ್ರತಿಯನ್ನು ಕೆಳಗಿನ ಅಧಿಕಾರಿಗಳಿಗೆ ಕಳುಹಿಸಲಾಗಿದೆ:
ಪ್ರಧಾನ ಮಹಾಲೇಖಪಾಲರು, ಬೆಂಗಳೂರು
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ ರಾಜ್ ಇಲಾಖೆಯ ಅಧೀನ ಕಾರ್ಯದರ್ಶಿಗಳು
ಪಂಚಾಯತ ರಾಜ್ ಆಯುಕ್ತರು, ಬೆಂಗಳೂರು
ಗ್ರಾಮೀಣಾಭಿವೃದ್ಧಿ ಆಯುಕ್ತರು, ರಾಜಾಜಿನಗರ, ಬೆಂಗಳೂರು
ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯ ಕಾರ್ಯದರ್ಶಿಗಳು
ಜಿಲ್ಲಾಧಿಕಾರಿಗಳು, ಬೀದರ
ಉಪ ಕಾರ್ಯದರ್ಶಿ ಶ್ರೀ ಮುಕ್ಕಣ್ಣ ಕರಿಗಾರರು ಹಾಗೂ
ಮುಖ್ಯ ಯೋಜನಾಧಿಕಾರಿ ಶ್ರೀ ಕಿಶೋರಕುಮಾರ ದುಬೆ ಅನುಪಾಲನೆಗಾಗಿ.
📑... ✍️ವರದಿ BSP ಪಕ್ಷದ ಜಿಲ್ಲಾ ಅಧ್ಯಕ್ಷ ಕೆಪೀಲ್ ಗೋಡಬೋಲೆ